ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಹಗ್ಗಜಗ್ಗಾಟ

ಬೆಂಗಳೂರು

ಕೆಎಂಎಫ್ ಅಧ್ಯಕ್ಷ ಸ್ಥಾನ ವಿಷಯ ಕುರಿತಾಗಿ ಬಿಕ್ಕಟ್ಟು ಸೃಷ್ಟಿಯಾಗಿದ್ದು, ನಾಗರಾಜು ಮತ್ತು ಎಂಪಿ ರವೀಂದ್ರ ಬೆಂಬಲಿಗರ ನಡುವೆ ಪೈಪೋಟಿ ಶುರುವಾಗಿದೆ.

ನಿರೀಕ್ಷೆಯಂತೆ ಎಲ್ಲವೂ ಸುಸೂತ್ರವಾಗಿ ನಡೆದಿದ್ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರದಂತೆಯೇ ಎಂಪಿ ರವೀಂದ್ರ ಕೆಎಂಎಫ್ ಅಧ್ಯಕ್ಷರಾಗಬೇಕಿತ್ತು. ಆದರೆ, ನಾಗರಾಜ್ ಈ ಹಿಂದೆ ನೀಡಿದ್ದ ರಾಜೀನಾಮೆ ಪತ್ರವನ್ನು ಸದಸ್ಯರ ಮಂಡಳಿ ಸಭೆಯಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ರಾಕೇಶಸಿಂಗ್ ಅಂಗೀಕರಿಸಿ, ಚುನಾವಣಾಧಿಕಾರಿಗೆ ಕಳಿಸಿದ್ದು, ಅಧ್ಯಕ್ಷ ಸ್ಥಾನದ ಆಯ್ಕೆಗಾಗಿ ಹೊಸದಾಗಿ ಚುನಾವಣೆ ನಡೆಸುವಂತೆ ಸೂಚಿಸಿದ್ದಾರೆ.

ಆದರೆ, ಇದನ್ನೊಪ್ಪದ ನಾಗರಾಜ್ ತಮ್ಮ ಬೆಂಬಲಿಗರ ಜೊತೆ ಮೆರವಣಿಗೆಯಲ್ಲಿ ಆಗಮಿಸಿ, ತಾನು ರಾಜೀನಾಮೆ ನೀಡಿಯೇ ಇಲ್ಲ. ಈಗಲೂ ನಾನೇ ಅಧ್ಯಕ್ಷನಾಗಿದ್ದು, ರಾಕೇಶ್‌ಸಿಂಗ್ ಅವರ ಕ್ರಮದ ವಿರುದ್ಧವಾಗಿ ಹೈಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ. ಇದರಿಂದ ಅಧ್ಯಕ್ಷ ಸ್ಥಾನ ಕುರಿತಂತೆ ಬಿಕ್ಕಟ್ಟು ಸೃಷ್ಟಿಯಾಗಿದೆ. ಕೆಎಂಎಫ್ ಅಧ್ಯಕ್ಷಗಿರಿಗಾಗಿ ಇಂತಹ ರಂಪಾಟ ನಡೆಯುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಸೋಮಶೇಖರ ರೆಡ್ಡಿ ಮತ್ತು ಸದಾನಂದಗೌಡ ನಡುವೆ ಇದೇ ಕಾರಣಕ್ಕಾಗಿ ಪೈಪೋಟಿ ನಡೆದಿತ್ತು. ಸೋಮಶೇಖರ ರೆಡ್ಡಿ ಹಾಗೂ ಎಚ್‌ಡಿ ರೇವಣ್ಣ ನಡುವೆಯೂ ಇದೇ ವಿದ್ಯಮಾನ ಪುನರಾವರ್ತನೆಗೊಂಡಿತ್ತು.

ನಾಗರಾಜ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಂಬಂಧ ನಿರ್ದೇಶಕರ ಸಭೆ ನಡೆಯಿತು. ಈ ವೇಳೆ ಹಿರೇಗೌಡ ಅವರನ್ನು ಸಭಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಸಭೆಯಲ್ಲಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್, ನಾಗರಾಜ್ ಹಾಗೂ ಎಂ.ಪಿ ರವೀಂದ್ರ ಸೇರಿದಂತೆ ೧೧ ನಿರ್ದೇಶಕರು ಭಾಗವಹಿಸಿದ್ದರು. 

೧೭ ನಿದೇರ್ಶಕರ ಪೈಕಿ ೧೧ ನಿರ್ದೇಶಕರು ಭಾಗವಹಿಸಿದ್ದರು. ಸಭೆಯಲ್ಲಿ ನಾಗರಾಜ್ ಅವರ ರಾಜೀನಾಮೆ ಅಂಗೀಕರಿಸಿದ್ದು, ಮುಂದಿನ ಅಧ್ಯಕ್ಷರನ್ನಾಗಿ ಎಂ.ಪಿ ರವೀಂದ್ರ ಅವರನ್ನು ನೇಮಿಸಲು ಸರ್ವಾನುಮತದ ಒಪ್ಪಿದ್ದಾರೆಂದು ತಿಳಿದುಬಂದಿದೆ. 

ನಾನು ರಾಜೀನಾಮೆ ನೀಡಿಲ್ಲ

ಆದರೆ ನಾಗರಾಜು ಅವರು, ಸಭೆ ಆರಂಭಕ್ಕೂ ಮೊದಲು ಪ್ರತಿಕ್ರಿಯಿಸಿ, ನಾನು ರಾಜೀನಾಮೆ ಸಲ್ಲಿಸಿಲ್ಲ. ಇದು ನಕಲಿ ರಾಜೀನಾಮೆ ಪತ್ರ. ಈ ಸಂಬಂಧ ನ್ಯಾಯಾಲಯದ ಅರ್ಜಿ ಸಲ್ಲಿಸಿದ್ದೇನೆ ಎಂದು ಹೇಳಿದರು. 

ಚುನಾವಣಾ ಪ್ರತಿನಿಧಿಯಾಗಿರುವುದರಿಂದ ಕೆಎಂಎಫ್ ಅಧ್ಯಕ್ಷ ಸ್ಥಾನದಿಂದ ನನ್ನನ್ನು ವಜಾಗೊಳಿಸಲು ಯಾರಿಗೂ ಅಧಿಕಾರವಿಲ್ಲ. ರಾಜೀನಾಮೆ ಪಡೆಯಬೇಕೆಂಬ ಉದ್ದೇಶದಿಂದ ಖಾಲಿ ಪತ್ರದ ಮೇಲೆ ಸಹಿ ಹಾಕಿಸಿಕೊಂಡು, ನಕಲಿ ರಾಜೀನಾಮೆ ಪತ್ರ ಸೃಷ್ಠಿಸಿದ್ದಾರೆ ಎಂದು ಆರೋಪಿಸಿದರು. 

ನ್ಯಾಯಾಲಯದಲ್ಲಿ ಪ್ರಶ್ನೆಸಲು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್ ಸಲಹೆ ನೀಡಿದ್ದಾರೆ. ರಾಜೀನಾಮೆ ಪತ್ರ ನಕಲಿ ಎಂದು ಸ್ವತಃ ರಾಕೇಶ್ ಸಿಂಗ್ ಒಪ್ಪಿಕೊಂಡಿದ್ದಾರೆ. ಅವರು ಒಪ್ಪಿಕೊಂಡಿರುವ ಬಗ್ಗೆ ಮಾತನಾಡಿರುವ ಆಡಿಯೋ ಸಿಡಿ ನನ್ನ ಬಳಿಯಿದ್ದು, ಅದನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ. 

ಸಭೆ ಬಳಿಕ ಮಾತನಾಡಿದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂಪಿ ರವೀಂದ್ರ, ನಾಗರಾಜು ಅವರು ಹೇಳುತ್ತಿರುವ ಆಡಿಯೋ ವಿಚಾರ ಗಮನಕ್ಕೆ ಬಂದಿಲ್ಲ. ಕಾನೂನು ಹೋರಾಟ ಮಾಡುವುದಾದರೆ ಮಾಡಲಿ, ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ನಿದೇರ್ಶಕರ ಸಭೆಯಲ್ಲಿ, ನಾಗರಾಜು ಅವರ ರಾಜೀನಾಮೆಯನ್ನು ಸರ್ವಾನುಮತದಿಂದ ಒಪ್ಪಿಕೊಳ್ಳಲಾಗಿದೆ. ಮುಂದಿನ ಪ್ರಕ್ರಿಯೆಯನ್ನು ಸಭಾಧ್ಯಕ್ಷ ಹಿರೇಗೌಡ ಅವರು ತೀರ್ಮಾನಿಸಲಿದ್ದಾರೆ ಎಂದು ಹೇಳಿದರು

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s