ಕಾಂಗ್ರೆಸ್ ಮುಕ್ತ ಭಾರತದ ಕನಸಿಗೆ ಈ ಸೇರ್ಪಡೆ ನಾಂದಿಯಾಗಲಿದೆ: ಎಸ್‌ಎಂ ಕೃಷ್ಣ 

ಬೆಂಗಳೂರು

ಪ್ರಧಾನಿ ಮೋದಿ ಅವರ ಕಾಂಗ್ರೆಸ್ ಮುಕ್ತ ಭಾರತದ ಕನಸಿಗೆ ಈ ಸೇರ್ಪಡೆ ನಾಂದಿಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಹೇಳಿದರು. 

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ಅವರನ್ನು ಬಿಜೆಪಿ ಕಚೇರಿಯಲ್ಲಿ ಭರ್ಜರಿಯಾಗಿ ಸ್ವಾಗತಿಸಲಾಯಿತು. ಈ ವೇಳೆ ಮಾತನಾಡಿದ ಅವರು, ನಾನು ಬಿಜೆಪಿಗೆ ಸೇರಿದ್ದು ಉತ್ತರ ಪ್ರದೇಶ ಚುನಾವಣೆ ಫಲಿತಾಂಶದ ಬಳಿಕವಲ್ಲ. ಕಳೆದ ೯ ತಿಂಗಳ ಹಿಂದೆ ಕಾಂಗ್ರೆಸ್‌ನಲ್ಲಾದ ಮಾನಸಿಕ ಹಿಂಸೆಯಿಂದ ಇದು ಆರಂಭವಾಯಿತು. ಮೋದಿ ಅವರ ದೇಶ ಕಟ್ಟುವ ಕೆಲಸವನ್ನು ನೋಡಿ ಇಂದು ಬಿಜೆಪಿಗೆ ಬಂದಿದ್ದೇನೆ ಎಂದು ಹೇಳಿದರು. 

ದೇಶ ಕಟ್ಟುವ ಕೆಲಸ ಮಾಡುತ್ತಿರುವ ಮೋದಿ ಅವರಿಗೆ ಸಹಾಯ ಮಾಡಲು ಸೇರಿದ್ದೇನೆ ಹೊರೆತು, ಯಾವುದೇ ಅಧಿಕಾರದ ಆಸೆಯಿಂದಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ರಾಷ್ಟ್ರಾಧ್ಯಕ್ಷರು ಹೇಳಿದ ಕೆಲಸವನ್ನು ಮಾತ್ರ ಮಾಡುತ್ತೇನೆ. ೨೦೧೮ರ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ, ವಿಧಾನಸೌಧದಲ್ಲಿ ಕಾಣುವುದೇ ನನ್ನ ಗುರಿ ಎಂದರು. 

ವಂಶಪಾರಂಪರೆ ರಾಜಕೀಯ ಬೇಡ

ಇಂದಿನ ದಿನದಲ್ಲಿ ವಂಶಪಾರಂಪರೆಯ ರಾಜಕೀಯದಿಂದ ದೇಶ ಅಭಿವೃದ್ಧಿ ಸಾಧ್ಯವಿಲ್ಲ. ಬಿಜೆಪಿಯಲ್ಲಿರುವ ಪ್ರಜಾತಂತ್ರ ವ್ಯವಸ್ಥೆಗೆ ಬೆಂಬಲಿಸಲು ಪಕ್ಷಕ್ಕೆ ಬಂದಿದ್ದೇನೆ. ಯೋಗಿ ಆಧಿತ್ಯ ನಾಥ ಮುಖ್ಯಮಂತ್ರಿಯಾಗಿರುವುದು, ಮೋದಿ ಪ್ರಧಾನಿಯಾಗಿರುವುದು ಬಿಜೆಪಿಯ ಪ್ರಜಾತಂತ್ರ ವ್ಯವಸ್ಥೆಗೆ ಸಾಕ್ಷಿ ಎಂದರು.

ಅಮಿತ್ ಅವರೊಂದಿಗೆ ಹೇಗೆ ಕೃಷ್ಣ ಅವರು ಕಾರ್ಯನಿರ್ವಹಿಸುತ್ತಾರೆ ಎಂದು ಪ್ರಶ್ನಿಸಿರುವ ಖರ್ಗೆ ಅವರು, ಕಾಂಗ್ರೆಸ್‌ನ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಹೇಗೆ ಇದ್ದಾರೆಂದು ತಿಳಿಯುತ್ತಿಲ್ಲ. ಬೇರೆ ಅವರ ಬಗ್ಗೆ ಮಾತನಾಡುವ ಮೊದಲು, ಅವರ ಪಕ್ಷದ ಬಗ್ಗೆ ನೋಡಿಕೊಳ್ಳಲಿ ಮಾತನಾಡಲಿ ಎಂದು ಟೀಕಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತನಾಡಿ, ಕಾಂಗ್ರೆಸ್‌ನವರು ಕೆಲಸವಾದ ಬಳಿಕ ಕೃಷ್ಣ ಅವರನ್ನು ಈ ರೀತಿ ನಡೆಸಿಕೊಳ್ಳತ್ತಾರೆಂದು ತಿಳಿದಿರಲಿಲ್ಲ. ಕೃಷ್ಣ ಅವರಿಂದು ಬಿಜೆಪಿಗೆ ಸೇರಿರುವುದರಿಂದ, ಮೋದಿ ಅವರ ಕಾಂಗ್ರೆಸ್ ಮುಕ್ತ ಭಾರತ ನನಸಾಗುವುದರಲ್ಲಿ ಅನುಮಾನವಿಲ್ಲ ಎಂದು ವಿಶ್ವಾಸವ್ಯಕ್ತಪಡಿಸಿದರು.

ಉಪಚುನಾವಣೆ ರ‍್ಯಾಲಿಯಲ್ಲಿ ಭಾಗಿ

ಕೃಷ್ಣ ಅವರು ಮುಂದಿನ ದಿನದಲ್ಲಿ ಗುಂಡ್ಲುಪೇಟೆ ಹಾಗೂ ನಂಜನಗೂಡು ಕ್ಷೇತ್ರದಲ್ಲಿ ನಡೆಯುವ ರ‍್ಯಾಲಿಗಳಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದೇನೆ. ಇದರಿಂದ ಈ ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲಲ್ಲು ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷ್ಣ ಅವರು, ಬಿಜೆಪಿಯನ್ನು ಗೆಲ್ಲಿಸಲು ರ‍್ಯಾಲಿಯಲ್ಲಿ ಭಾಗವಹಿಸುವುದು ನನ್ನ ಕರ್ತವ್ಯ. ನಾನು ಅದನ್ನು ಮಾಡುತ್ತೇನೆ ಎಂದು ಹೇಳಿದರು.

ಈ ವೇಳೆ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಸೋಮಶೇಖರ್, ಲಕ್ಷ್ಮಣ ಸವದಿ, ಅರವಿಂದ ಲಿಂಬಾವಳಿ ಸೇರಿದಂತೆ ಮುಖಂಡರು ಭಾಗವಹಿಸಿದ್ದರು. 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s