​ಎಸ್ಎಸ್ಎಲ್ಸಿ ಪ್ರಶ್ನೆ ಮತ್ತು ಉತ್ತರ ಪತ್ರಿಕೆ ಬೇರೆ ಬೇರೆ!

– ಪ್ರಶ್ನೆ ಪತ್ರಿಕೆಯಲ್ಲಿಯೇ  ಉತ್ತರ ಬರೆಯುವ ಪದ್ಧತಿಗೆ ವಿದಾಯ ಹೇಳಿದ ಎಸ್ಎಸ್ಎಲ್ಸಿ ಮಂಡಳಿ
– ಮಂಡಳಿಯ ನಿರ್ಧಾರಕ್ಕೆ  ವಿದ್ಯಾರ್ಥಿಗಳು ಖುಷ್
– 20 ಪುಟಗಳ ಮುಖ್ಯ ಉತ್ತರ ಪತ್ರಿಕೆಯೊಂದಿಗೆ ಹೆಚ್ಚುವರಿ ಉತ್ತರ ಪತ್ರಿಕೆ ಪಡೆಯಲು ಅವಕಾಶ

ಬೆಂಗಳೂರು
ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮತ್ತೊಂದು ಸಿಹಿ ಸುದ್ದಿ ನೀಡಿದೆ. 
ಒಂದು ನಿಮಿಷ ತಡವಾಗಿ ಬಂದರೂ, ಪರೀಕ್ಷೆ ಬರೆಯಲು ಅವಕಾಶವಿಲ್ಲವೆಂದು ಹೇಳಿ ಶಾಕ್ ನೀಡಿದ್ದ ಮಂಡಳಿ, ಈಗ ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆ ಪ್ರತ್ಯೇಕ ಮಾಡಿ, ವಿದ್ಯಾರ್ಥಿಗಳು ನಿರಾಳವಾಗುವಂತೆ ಮಾಡಿದೆ. 

ಇಷ್ಟು ದಿನಗಳ ಕಾಲ ಪ್ರಶ್ನೆ ಪತ್ರಿಕೆಯಲ್ಲಿಯೇ ಉತ್ತರವನ್ನು ಬರೆಯಬೇಕೆನ್ನುವ ನಿಯಮ ವಾಪಾಸು ಪಡೆದು, ಉತ್ತರ ಪತ್ರಿಕೆ ಹಾಗೂ ಪ್ರಶ್ನೆ ಪತ್ರಕೆಯನ್ನು ಪ್ರತ್ಯೇಕ ಮಾಡಲಾಗಿದೆ ಎಂದು ಸುತ್ತೋಲೆ ಹೊರಡಿಸಿದೆ. 

ಕಳೆದ ಹತ್ತು ವರ್ಷಗಳ ಹಿಂದೆ ಇದೇ ಮಾದರಿಯ ನಿಯಮವಿತ್ತು. ಅದರೆ ಬಹು ಆಯ್ಕೆ ಪ್ರಶ್ನೆಗಳನ್ನು ಪರಿಚಯಿಸಿದ ಬಳಿಕ, ಪ್ರಶ್ನೆ ಪತ್ರಿಕೆಯಲ್ಲಿಯೇ ಉತ್ತರ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ವಿದ್ಯಾರ್ಥಿಗಳು ತಪ್ಪು ಉತ್ತರ ಬರೆದು, ಸರಿ ಪಡಿಸಿಕೊಳ್ಳುವ ಅವಕಾಶವಿರುತ್ತಿರಲಿಲ್ಲ. ಮೊದಲು ತಪ್ಪು ಉತ್ತರ ಬರೆದು, ನಂತರ ಸರಿ ಉತ್ತರ ತಿಳಿದರೂ ಅದನ್ನು ತಿದ್ದುಕೊಳ್ಳಲು ಸ್ಥಳವಿರಲಿಲ್ಲ. ಇದರೊಂದಿಗೆ ಹೆಚ್ಚುವರಿಯಾಗಿ ಉತ್ತರ ಬರೆಯಲು ಅಡಿಷನಲ್ ಶೀಟ್ಗಳನ್ನು ಸಹ ನೀಡುತ್ತಿರಲಿಲ್ಲ. ಇದು ಅನೇಕ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು. ಆದರೆ ಪ್ರಸಕ್ತ ವರ್ಷದಿಂದ ಪುನಃ, ಹಳೇ ಮಾದರಿಯಲ್ಲಿ ಪ್ರಶ್ನೆ ಹಾಗೂ ಉತ್ತರ ಪತ್ರಿಕೆಗಳನ್ನು ಪ್ರತ್ಯೇಕವಾಗಿ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸುವುದರಿಂದ ವಿದ್ಯಾರ್ಥಿಗಳು ಸ್ವಲ್ಪ ನಿರಾಳರಾಗಿದ್ದಾರೆ.
ನೂತನ ಬದಲಾವಣೆ ಏನು?
ಪ್ರಶ್ನೆ ಪತ್ರಿಕೆ ಹಾಗೂ ಉತ್ತರಪತ್ರಿಕೆ ಪ್ರತ್ಯೇಕವಾಗಿ ನೀಡಲಾಗುತ್ತದೆ. ಮೊದಲು 20 ಪುಟಗಳ ಬುಕ್ಲೆಟ್ ನೀಡಲಾಗುತ್ತದೆ. ನಂತರ ಹೆಚ್ಚುವರಿ ಪುಟಗಳ ಅವಶ್ಯಕತೆ ಇದ್ದರೆ, ನಾಲ್ಕು ಪುಟಗಳಂತೆ ಹೆಚ್ಚುವರಿಯಾಗಿ ನೀಡಲಾಗುವುದು. ಇದರೊಂದಿಗೆ ವಿದ್ಯಾಥರ್ಿಗಳಿಗೆ ಪ್ರಶ್ನೆ ಪತ್ರಿಕೆಯನ್ನು ತಗೆದುಕೊಂಡು ಹೋಗಲು ಅವಕಾಶ ಸಿಗುವುದರಿಂದ, ಮನೆಯಲ್ಲಿ ಕುಳಿತು ತಾವು ಬರೆದ ಉತ್ತರಗಳನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳುವುದಕ್ಕೆ ಸಹಾಯವಾಗಲಿದೆ  ಎಂದು ಎಸ್ಎಸ್ಎಲ್ಸಿ ಮಂಡಳಿ ಅಧಿಕಾರಿಗಳು ಆಭಿಪ್ರಾಯಪಟ್ಟಿದ್ದಾರೆ. 
ಪ್ರಶ್ನೆ ಪತ್ರಿಕೆ ಹಾಗೂ ಉತ್ತರಪತ್ರಿಕೆ ಒಂದೇ ಬುಕ್ಲೆಟ್ನಲ್ಲಿ ಬರುತ್ತಿದ್ದರಿಂದ, ವಿದ್ಯಾರ್ಥಿಗಳು ಹೇಗೆ ಬರೆದಿದ್ದಾರೆ ಎನ್ನುವುದೇ ತಿಳಿಯುತ್ತಿರಲಿಲ್ಲ. ಅನೇಕ ಬಾರಿ ಶಿಕ್ಷಕರಿಗೆ ಪ್ರಶ್ನೆಪತ್ರಿಕೆಯ ಬುಕ್ಲೆಟ್ ಸಿಗದೇ, ಯಾವ ಪ್ರಶ್ನೆಗಳು ಬಂದಿವೇ ಎನ್ನುವುದನ್ನು ತಿಳಿಯಲು ಹರಸಾಹಸ ಪಡಬೇಕಾದ ಸ್ಥಿತಿಯಿತ್ತು. ಆದರೆ ಮಂಡಳಿ ಮತ್ತೊಮ್ಮೆ ಹಳೇ ವಿಧಾನವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿರುವುದರಿಂದ ಶಿಕ್ಷಕರಿಗೂ ಸಹಾಯವಾಗಲಿದೆ ಎಂದು ಕೆಲ ಪ್ರೌಢಶಾಲಾ ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಪ್ರಶ್ನೆಪತ್ರಿಕೆಯಲ್ಲಿನ ಬದಲಾವಣೆ ಸಂಬಂಧ ಡಿಡಿಪಿಐ ಹಾಗೂ ಬಿಇಒಗಳ ಮೂಲಕ ಶಾಲೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ಶಿಕ್ಷಣ ಇಲಾಖೆ ಮಾಹಿತಿ ತಲುಪಿಸಿದೆ. 

ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಪ್ರತ್ಯೇಕ ಮಾಡಿರುವುದರಿಂದ ಅನುಕೂಲವಾಗಲಿದೆ. ಈ ಹಿಂದೆ ಹೆಚ್ಚು ಉತ್ತರ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಈಗ ಹೆಚ್ಚುವರಿ ಉತ್ತರ ಪತ್ರಿಕೆ ನೀಡುವುದರಿಂದ ನಮಗೆ ಬರೆಯುವುದಕ್ಕು ಸಹಾಯವಾಗಲಿದೆ. 

– ರಾಕೇಶ್, ಎಸ್ಎಸ್ಎಲ್ಸಿ ವಿದ್ಯಾರ್ಥಿ

ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಈ ಹಿಂದಿನದ ಬದಲಿಗೆ ಪ್ರತ್ಯೇಕ ಪ್ರಶ್ನೆ ಹಾಗೂ ಉತ್ತರ ಪತ್ರಿಕೆ ನೀಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಈಗಾಗಲೇ ರಾಜ್ಯದ ಡಿಡಿಪಿಐ ಹಾಗೂ ಬಿಇಒಗಳಿಗೆ ಮಾಹಿತಿ ನೀಡಲಾಗಿದೆ.

– ಯಶೋಧ ಬೊಪಣ್ಣ, ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿ ನಿರ್ದೇಶಕಿ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s