​ಯುದ್ಧವಿಮಾನ ಚಾಲನೆಗೆ ಏಕಾಗತ್ರೆಯಿಲ್ಲದಿದ್ದರೆ ಅಪಾಯ ಖಂಡಿತ

– ಶೇ100ರಷ್ಟು ಏಕಾಗ್ರತೆ ಅಗತ್ಯ

 – ನಾಗರಿಕ ವಿಮಾನ ಚಾಲಿಸುವುದು ಸುಲಭ

 -ಭಾರತದ ಸಂಸ್ಕೃತಿಯೇ ಚೆಂದ

ಬೆಂಗಳೂರು
ಯುದ್ಧವಿಮಾನಗಳನ್ನು ಹಾರಾಟ ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕೆ ಶೇ.100ರಷ್ಟು ಏಕಾಗತ್ರೆಯಿಂದ ಚಾಲಾಯಿಸಿದರೆ ಮಾತ್ರ ದುರಂತ ಸಂಭವಿಸುವುದಿಲ್ಲ. ಸ್ವಲ್ಪ ಯಾಮಾರಿದರೂ ಜೀವ ಸಹಿತ ಉಳಿಯುವುದು ಸಾಧ್ಯವಿಲ್ಲ. ಹೀಗೆಂದು ಯುದ್ಧವಿಮಾನಗಳ ಚಾಲನೆಯ ಬಗ್ಗೆ ಗೆಫ್ರಿನ್ ಯುದ್ಧವಿಮಾನದ ಪೈಲೆಟ್ ಜಾನ್ ಜಾಕಂಬ್ಸನ್ ತಮ್ಮ ಅನುಭವ ಹಂಚಿಕೊಂಡರು. 
ವೈಮಾನಿಕ ಪ್ರದರ್ಶನದ ಬಳಿಕ ಜಾನ್ ಅವರೊಂದಿಗೆ ಮಾತಿಗಿಳಿದಾಗ ಎರಡು ದಶಕದ ವಿಮಾನ ಹಾರಾಟದ ಅನುಭವ, ಭಾರತದೊಂದಿಗೆ ಸಂಬಂಧ ಹಾಗೂ ಭಾರತೀಯ ಸಂಸ್ಕೃತಿಯ ಬಗ್ಗೆ ಮಾತನಾಡಿದರು. 

ಯುದ್ಧವಿಮಾನದ ಪೈಲೆಟ್ಗೆ ಬೇಕಿರುವ ಅರ್ಹತೆ ?
ಯುದ್ಧವಿಮಾನ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಏಕಾಗತ್ರೆ, ಪರಿಶ್ರಮ ಮುಖ್ಯ. ಶೇ.100ರಷ್ಟು ಏಕಾಗತ್ರೆ ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದರಿಂದ ಹಾರಾಟ ಆರಂಭಕ್ಕೂ ಮೊದಲು ಹಾರಾಟಕ್ಕೆ ಮಾನಸಿಕವಾಗಿ ಅಪಾಯ ಎದುರಿಸಲು ಸಿದ್ಧರಾಗಿರಬೇಕು. 

ಸಾಹಸ ಪ್ರದರ್ಶನ ಮಾಡುವ ವೇಳೆ ಆಹಾರ ಪದ್ಧತಿ ಹೇಗಿರುತ್ತದೆ ?
ಆಹಾರ ಪದ್ಧತಿಯಲ್ಲಿ ಹೆಚ್ಚಿನ ಬದಲಾವಣೆಯಿರುವುದಿಲ್ಲ. ಆದರೆ ಪ್ರದರ್ಶನದ ಸಮಯದಲ್ಲಿ ಮಿತ ಆಹಾರ ಸೇವಿಸುವುದು ಸೂಕ್ತ. ಊಟ ಮಾಡದಿದ್ದರೂ ತೊಂದರೆ. ಕೆಲ ಪೈಲೆಟ್ಗಳಿಗೆ ಸಾಹಸ ಪ್ರದರ್ಶನದ ಬಳಿಕ ಊಟ ಜೀರ್ಣವಾಗುದಿಲ್ಲ. ಅದಕ್ಕಾಗಿ ಮೊದಲೇ ಅವರಿಗೆ ತರಬೇತಿ ನೀಡುತ್ತೇವೆ. 

ನೀವು ಎಷ್ಟು ವರ್ಷದಿಂದ ಗ್ರಿಫನ್ ಹಾರಾಟ ನಡೆಸಿದ್ದೀರಾ?
ಕಳೆದ 19 ವರ್ಷದಿಂದ ನಾನು ಪೈಲೆಟ್ ಆಗಿ ಕಾರ್ಯನಿರ್ವಹಿಸಿದ್ದು ಸುಮಾರ 1000 ಗಂಟೆಗಳ ಹಾರಾಟದ ಅನುಭವವಿದೆ. ವಿವಿಧ ಯುದ್ಧವಿಮಾನಗಳನ್ನು ನಡೆಸಿದ್ದು, ಕಳೆದೊಂದು ವರ್ಷದಿಂದ ಗ್ರಿಫನ್ನಲ್ಲಿದ್ದೇನೆ.

ಯುದ್ಧ ವಿಮಾನಕ್ಕೂ ನಾಗರಿಕ ವಿಮಾನ ಹಾರಾಟಕ್ಕೆ ವ್ಯತ್ಯಾಸವೇನು ?
ನಾಗರಿಕ ವಿಮಾನ ಹಾರಾಟ ಸುಲಭ. ಒಂದೇ ವೇಗದಲ್ಲಿ ನಿರ್ದಿಷ್ಟ ಎತ್ತರದಲ್ಲಿ ಹೋಗುತ್ತಿರುತ್ತದೆ. ಆದರೆ ಯುದ್ಧವಿಮಾನ 100 ಅಡಿಯಿಂದ ಹಿಡಿದು 50000 ಅಡಿ ಅಂತರದಲ್ಲಿ ಸಮಯಕ್ಕೆ ತಕ್ಕಂತೆ ಹಾರಾಟ ನಡೆಸಬೇಕು. ಆದ್ದರಿಂದ ಯುದ್ಧ ವಿಮಾನದ ಪೈಲೆಟ್ ಆಗಲು ಅನುಭವ ಹೆಚ್ಚಿರಬೇಕು. 

ಪೈಲೆಟ್ ಆಗುವುದು ನಿಮ್ಮ ಬಾಲ್ಯದ ಕನಸೇ?
ನಿಜವಾಗಿಯೂ ಇಲ್ಲ. ಪ್ರೌಢಶಾಲೆಯ ತನಕ ನಾನು ಮೆದುಳು ತಜ್ಞನಾಗಬೇಕೆಂಬ ಹಂಬಲವಿತ್ತು. ಆದರೆ ಸೈನಿಕ ಶಾಲೆಯಲ್ಲಿ ಪೈಲೆಟ್ ಒಬ್ಬರನ್ನು ಭೇಟಿ ಮಾಡಿದಾಗ ಅವರು ಪೈಲೆಟ್ ಆಗಲು ಹೇಳಿದರು. ಅದಕ್ಕಾಗಿ ಈ ವೃತ್ತಿಗೆ ಬಂದೆ. ಆದರೆ ಬಂದ ಬಳಿಕ ಈ ವೃತ್ತಿ ಸಂತಸಕೊಟ್ಟಿದೆ. 

ಭಾರತಕ್ಕಿದು ಮೊದಲ ಭೇಟಿಯೇ?
ವೈಮಾನಿಕ ಪ್ರದರ್ಶನಕ್ಕಿದು ಎರಡನೇ ಭೇಟಿ. 2009ರಲ್ಲಿ ನಡೆದ ಏರ್ ಶೋನಲ್ಲಿ ಭಾಗವಹಿಸಿದ್ದೆ. ಅದನ್ನು ಬಿಟ್ಟರೆ 1994ರಲ್ಲಿ ಭಾರತದ ಪ್ರವಾಸಕ್ಕೆಂದು ಆಗಮಿಸಿದ್ದೆ. ನನಗೆ ಭಾರತದ ಸಂಸ್ಕೃತಿ ನೋಡಿದರೆ ಸಂತೋಷವಾಗುತ್ತದೆ.

ಎರಡು ದಶಕಗಳ ಹಿಂದಿನ ಭಾರತಕ್ಕೂ ಈಗಿನ ಭಾರತಕ್ಕೂ ಬದಲಾವಣೆಗಳೇನು?
ಹೋದ 20 ವರ್ಷದಲ್ಲಿ ಭಾರತ ಬಹಳ ಬದಲಾಗಿದೆ. ಹೆಚ್ಚು ಪಾಶ್ಚಿಮಾತ್ಯ ಸಂಸ್ಕೃತಿ ಕಾಣಿಸುತ್ತಿದೆ. ನಗರಗಳು ಬದಲಾಗಿದೆ. ಈ ಹಿಂದೆ ಭೇಟಿ ನೀಡಿದಾಗ ನನಗೆ ಭಾರತದ ಸಂಸ್ಕೃತಿ ಹೆಚ್ಚಾಗಿ ಕಾಣಿಸುತ್ತಿತ್ತು. ಆದರೆ ಇಂದು ಕಾಣಸಿಗುತ್ತಿಲ್ಲ. ಇಂದಿನ ಜಾಗತೀಕರಣಕ್ಕೆ ತಕ್ಕಂತೆ ಬದಲಾವಣೆಯಾಗಿರುವುದು ಉತ್ತಮ ಸಂಗತಿಯಾದರೂ, ನನಗೆ ಹಳೆ ಭಾರತದ ಮೇಲೆ ಹೆಚ್ಚು ಪ್ರೀತಿ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s