ಕರ್ನಾಟಕ ರಾಜ್ಯದೊಂದಿಗೆ ನೀರಿನ ಹಂಚಿಕೆಯ ವಿವಾದಗಳು

sc_cauvery_01072013ಅತ್ತ ದರಿ ಇತ್ತ ಪುಲಿ ಎಂಬ ಮಾತಿಗೆ ನಮ್ಮ ಕರ್ನಾಟಕ ರಾಜ್ಯವನ್ನು ಉತ್ತಮ ಉದಾಹರಣೆಯಾಗಿ ಬಳಸಬಹುದು. ನಮ್ಮ ರಾಜ್ಯದ ಜನತೆಗೆ ಕುಡಿಯಲು ನೀರಿಲ್ಲ ಬಿತ್ತಲು ಭೂಮಿ ಇದ್ದರು ಅದಕ್ಕೆ ಬೇಕಾದ ನೀರಿಲ್ಲ ಆದರೆ ಅಕ್ಕ ಪಕ್ಕದ ರಾಜ್ಯಗಳಿಗೆ ಮಾತ್ರ ಸಮಯಕ್ಕೆ ಸರಿಯಾಗಿ ನೀರಿಲ್ಲದಿದ್ದರು ಕೊಡಬೇಕು ಇದು ನಮ್ಮ ರಾಜ್ಯಕ್ಕೆ ಬಂದಿರುವ ರ್ದೌಭಾಗ್ಯ.
ನಮ್ಮ ರಾಜ್ಯಕ್ಕೆ ಮೊದಲೇ ಹೇಳಿದಂತೆ ಅಕ್ಕ ಪಕ್ಕದ ಎಲ್ಲ ರಾಜ್ಯಗಳೊಂದಿಗು ಸಹ ವೈಮನಸ್ಸು ಇದ್ದೇ ಇದೆ. ಇದಕ್ಕೆ ಪ್ರಮುಖ ಕಾರಣ ನೀರಿನ ಹಂಚಿಕೆ ವಿವಾದ .
ನೆರೆ ರಾಜ್ಯದೊಂದಿಗೆ ನೀರಿನ ಹಂಚಿಕೆಯ ವಿವಾದಗಳು, ಕಾರಣ ಹಾಗೂ ಅದರಿಂದ ಆಗುತ್ತಿರುವ ಪರಿಣಾಮಗಳು ನೋಡುವುದಾದರೆ

1. ಕಾವೇರಿ ನದಿ ನೀರು ಹಂಚಿಕೆ
ಕರ್ನಾಟಕಕ್ಕೆ ಮೊದಲಿನಿಂದಲು ತಲೆ ನೋವಾಗಿರುವುದು ಕಾವೇರಿ ನದಿ ನೀರು ಹಂಚಿಕೆ . ಈ ವಿವಿಧಾ ಪ್ರಮುಖವಾಗಿಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಇದ್ದರು ಕೇರಳ ,ಪಾಂಡೀಚೆರಿ ರಾಜ್ಯಗಳು ಕಾವೇರಿ ನೀರಿನಲ್ಲಿ ಪಾಲು ಕೇಳುತ್ತಿವೆ. ಸುಪ್ರೀಂ ಕೋರ್ಟ್‍ನಲ್ಲಿರುವ ವಿವಾದ ಸದ್ಯ ಮಧ್ಯಂತರ ತೀರ್ಪಿನಂತೆ ನೀರು ಹಂಚಿಕೆ ಮಾಡಲಾಗುತ್ತಿದು ಕಾವೇರಿ ನ್ಯಾಯಧೀಕರಣ ಸಮಿತಿಯನ್ನು ರಚಿಸಿದೆ. 2007ರ ಮಧ್ಯಂತರ ತೀರ್ಪಿನ ಪ್ರಕಾರ ಕರ್ನಾಟಕಕ್ಕೆ 270 ಟಿಎಂಸಿ, ತಮಿಳುನಾಡಿಗೆ 419  ಪಾಂಡಿಚೇರಿಗೆ 7 ಹಾಗೂ ಕೇರಳಗೆ 30 ಟಿಎಂಸಿ ನೀರು ಬಿಡುಗಡೆಯಾಗಬೇಕೆಂದು ಹೇಳಿದೆ. ತಮಿಳುನಾಡಿನ 419 ರಲ್ಲಿ 192 ಟಿಎಂಸಿ ಕರ್ನಾಟಕದಿಂದ ಹರಿಯಲಿದೆ. ಇಷ್ಟೆಲ್ಲ ಆದರು ಸಹ ಪ್ರತಿವರ್ಷ ಕೋರ್ಟ್‍ಗೆ ಹೋಗುವುದಂತು ತಪ್ಪುವುದಿಲ್ಲ.

2. ಕಳಸಾ ಬಂಡೂರಿ ವಿವಾದ
ಮಹದಾಯಿ ನದಿಯು ಸುಮಾರು 77 ಕಿ.ಮೀ. ಹರಿಯುತ್ತದೆ. ಕರ್ನಾಟಕದಲ್ಲಿ ಇದು ಸುಮಾರು 29 ಕಿ.ಮೀ.ಹರಿಯುತ್ತದೆ. ರಾಜ್ಯದ ಬೆಳಗಾವಿಯ ಮೂಲಕ ದಾಟಿ ಗೋವಾದಲ್ಲಿ ಸಮುದ್ರ ಸೇರಿಕೊಳ್ಳುತ್ತದೆ. ಕರ್ನಾಟಕದ ಮೂಲಕ ಹರಿದು ಹೋಗುವ ನೀರನ್ನು ಮಲಪ್ರಭಾ ಡ್ಯಾಂನಲ್ಲಿ ಸಂಗ್ರಹಿಸಿ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವುದು ಮಹಾದಾಯಿ ಅಥವಾ ಕಳಸಾ-ಬಂಡೂರಿ ಯೋಜನೆ.
ಕರ್ನಾಟಕ ಸರ್ಕಾರ 1988 ರಲ್ಲಿ ಯೋಜನೆಗೆ ಒಪ್ಪಿಗೆ ನೀಡಿತ್ತು ಆದರೆ, ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು ಆಗ ಮಹಾದಾಯಿ ಯೋಜನೆಯ ವರದಿ ನೀಡಿದ್ದ ಸಮಿತಿಯಲ್ಲಿದ್ದ ಎಸ್‌.ಆರ್.ಬೊಮ್ಮಾಯಿ ಅವರು 1989ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಗೋವಾ ಸಿಎಂ ಪ್ರತಾಪ್ ಸಿಂಗ್ ರಾಣಾ ಜೊತೆ ಮಾತುಕತೆ ನಡೆಸಿದರು. ನಂತರ ಯೋಜನೆಗೆ ಗೋವಾ ಒಪ್ಪಿಗೆ ನೀಡಿತು.
ಕೇಂದ್ರ ಸರ್ಕಾರ 2002 ರಲ್ಲಿ ಯೋಜನೆಗೆ ಒಪ್ಪಿಗೆ ಕೊಟ್ಟಿತು. 2002 ರ ಏ.30 ರಂದು ಕಳಸಾ ಬಂಡೂರಿ ಕಾಲುವೆ ಮೂಲಕ ನೀರನ್ನು ಹರಿಸಲು ಕೇಂದ್ರ ಸರ್ಕಾರದ ಜಲಸಂಪನ್ಮೂಲ ಸಚಿವಾಲಯವೂ ಒಪ್ಪಿಗೆ ನೀಡಿತು. ಆದರೆ, 2002ರ ಮೇನಲ್ಲಿ ಮತ್ತೆ ಗೋವಾ ಸರ್ಕಾರ ಯೋಜನೆ ಬಗ್ಗೆ ತಕರಾರು ಎತ್ತಿತು.
ಈ ನದಿ ವಿವಾದದ ಬಗ್ಗೆ ನ್ಯಾಯಾಧೀಕರಣ ರಚಿಸುವಂತೆ ಗೋವಾ ಸರ್ಕಾರ 2002ರಲ್ಲಿ ಕೇಂದ್ರ ಜಲಸಂಪನ್ಮೂಲ ಇಲಾಖೆಗೆ ಪತ್ರ ಬರೆಯಿತು. 2002 ರ ಸೆಪ್ಟೆಂಬರ್‌ನಲ್ಲಿ ಯೋಜನೆಗೆ ಕೇಂದ್ರ ಜಲ ಆಯೋಗ ತಡೆ ನೀಡಿತು. ಸಚಿವರ ಮಾತುಕತೆಯ ನಂತರ ಬೆಳಗಾವಿಯ ಜಿಲ್ಲೆಯ ಕಣಕುಂಬಿಯಲ್ಲಿ ಜಲಾಶಯ ನಿರ್ಮಿಸಲು 2006 ರ ಸೆಪ್ಟೆಂಬರ್‌ನಲ್ಲಿ ಭೂಮಿ ಪೂಜೆ ಮಾಡಲಾಯಿತು. ಆದರೆ 2006 ರ ನವೆಂಬರ್‌ನಲ್ಲಿ ಗೋವಾ ಸರ್ಕಾರ ಈ ಯೋಜನೆಗೆ ತಡೆ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತು. ಕಾಮಗಾರಿಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತು. 2010ರಲ್ಲಿ ಮಹದಾಯಿ ಜಲ ವಿವಾದ ನ್ಯಾಯಾಧೀಕರಣವನ್ನು ನೇಮಕ ಮಾಡಲಾಯಿತು.
2014ರಲ್ಲಿ ನ್ಯಾಯಾಧೀಕರಣದ ತಂಡ ಉತ್ತರ ಕರ್ನಾಟಕ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಆದರೆ ಇದುವರೆಗು ಈ ಸಮಿತಿ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಇದು ವಿವಾದ ಮುಂದುವರೆಯಲು ಕಾರಣವಾಗಿದೆ.

3. ಹೊಗೇನಕಲ್ ಡ್ಯಾಮ್ ವಿಚಾರ
ಹೊಗೇನಕಲ್ ಯೋಚನೆ ಸಹ ಕರ್ನಾಟಕ ಹಾಗೂ ತಮಿಳುನಾಡಿಗೆ ಸಂಬದಿಸಿದ್ದು. ಕರ್ನಾಟಕ ಸರ್ಕಾರ ಹೊಗೇನಕಲ್ ಬಳಿ ಕುಡಿಯುವ ನೀರಿನ ಯೋಜನೆ ಹಾಗೂ ವಿದ್ಯುತ್ ಸ್ಥಾವರ ನಿರ್ಮಾಣ ಕಾಮಗಾರಿಯನ್ನು 2008ರಲ್ಲಿ ಪ್ರಾರಂಭಿಸಿತ್ತು . ಇದಕ್ಕೆ ತೀವ್ರವಾಗಿ ವಿರೋದಿಸಿü ತಮಿಳುನಾಡು ಸರ್ಕಾರ ಮತ್ತೊಮ್ಮೆ ಕ್ರೇಂದ್ರ ಹಾಗೂ ಸುಪ್ರೀಂ ಬಾಗಿಲಿಗೆ ಹೋಗಿದೆ. ಆದರೆ ಈ ಯೋಜನಯಿಂದ ತಮಿಳುನಾಡು ಕಳೆದುಕೋಳ್ಳುವುದರಲ್ಲಿ ಏನು ಇಲ್ಲ ಏಕೆಂದರೆ ಜಾಸ್ತಿಯಾದ ನೀರನ್ನು ಈ ಯೋಜನೆಗೆ ಬಳಸಿಕೊಳ್ಳುವುದಾಗಿ ಕರ್ನಾಟಕ ಸರ್ಕಾರ ಈಗಾಗಲೇ ಘೋಷಿಸಿದೆ.

4. ಅಲಮಟ್ಟಿ :
ಆಲಮಟ್ಟಿ ಡ್ಯಾಂ ಕೃಷ್ಣ ನದಿಗೆ ಅಡ್ಡವಾಗಿ ಕಟ್ಟಲಾಗಿದ್ದು ನೀರಿನ ಹಂಚಿಕೆ ವಿವಾದ ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರಗಳ ನಡುವೆ ಇದೆ. ಸುಪ್ರೀಂ ಕೋರ್ಟ್ ಕೃಷ್ಣಾ ನ್ಯಾಯ ಮಂಡಳಿ ರಚಿಸಿ ಕರ್ನಾಟಕಕ್ಕೆ 907, ಆಂಧ್ರಗೆ 1005 ಹಾಗೂ ಮಹರಾಷ್ಟ್ರಕ್ಕೆ 666 ಟಿಎಂಸಿ ಹಂಚಿಕೆ ಮಾಡಿತ್ತು. ನಂತರ ಕರ್ನಾಟಕ ಮಳೆ ಹೆಚ್ಚಾದಾಗ ಸುಮ್ಮನೆ ನೀರು ಸಮುದ್ರ ಸೇರುವುದನ್ನು ತಪ್ಪಿಸಲು ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ರಿಂದ 524.256 ಮೀಟರ್‍ಗೆ ಎತ್ತರಿಸುವುದಾಗಿ ಯೋಜನೆ ರೂಪಿಸಿತು ಇದನ್ನು ವಿರೋಧಿಸಿ ಆಂದ್ರ ಸುಪ್ರೀಂ ಮೆಟ್ಟಿಲೆರಿತು. ಆದರೆ ತೀರ್ಪು ಕರ್ನಾಟಕದ ಪರವಾಗಿ ಬಂದಿದೆ.
ಕರ್ನಾಟಕ ರಾಜ್ಯ ಪ್ರತಿ ಹನಿ ನೀರು ತಗೆದುಕೊಳ್ಳಬೇಕಾದರು ಹಿಂದೆ ಮುಂದೆ ನೋಡಬೇಕಾದ ಸನ್ನಿವೇಶದಲ್ಲಿದೆ. ನೀರು ಎಲ್ಲಿರಿಗೂ ಆತ್ಯವಶ್ಯಕ ಎಂಬುದರಲ್ಲಿ ಎರಡನೇಯ ಮಾತಿಲ್ಲ. ಆದರೆ ನಮ್ಮ ಜನರಿಗೆ ಕುಡಿಯಲು ನೀರಿಲ್ಲ, ರೈತರಿಗೆ ಭೂಮಿ ಹಸನು ಮಾಡಲು ನೀರಿನ ಆಭಾವವಿದೆ ಎಂದಾಗ ನಮ್ಮ ಮನೆಯ ಸಮಸ್ಯೆ ಬಿಟ್ಟು ಬೇರೆಯವರಿಗೆ ನೀಡು ಎನ್ನುವುದರಲ್ಲಿ ಆರ್ಥವಿಲ್ಲ. ನೆರೆಹೊರೆಯ ರಾಜ್ಯಗಳೆಂದರೆ ಪರಸ್ಪರ ಸ್ನೇಹ ವಿಶ್ವಾಸಗಳಿಂದ ನಡೆದರೆ ದೇಶದ ಆಭಿವೃಧ್ದಿ ಸಾಧ್ಯ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s